DEEPOTSAVA 2014
ಸಾಲಿಗ್ರಾಮ :- ಶ್ರೀ ದೇವಳದ ಸಾಂಪ್ರಾದಾಯಿಕ ದೀಪೋತ್ಸವವು ದಿನಾಂಕ 21-11-2014 ರ FRIDAY ನಡೆಯುತ್ತಿದ್ದು ತಾವೆಲ್ಲರೂ ಈ ಸೇವೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ. ಸಂಜೆ ಗಂಟೆ 7.30 ಕ್ಕೆ ಮಹಾಮಂಗಳಾರತಿ, ಹಿರಿರಂಗಪೂಜೆ, ದೀಪೋತ್ಸವ, SILVERರಥೋತ್ಸವ, ತೆಪ್ಪೋತ್ಸವ ನಡೆಯಲಿದೆ. ಹಾಗೂ ಸಂಜೆ ಗಂಟೆ 6.30 ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ.
ತಾವು ತಮ್ಮವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕ್ರಪೆಗೆ ಪಾತ್ರರಾಗುವರೆ ನಿಮಗಿದು ಆತ್ಮೀಯ ಕರೆಯೊಲೆ.
ಅಧ್ಯಕ್ಷರು ಮತ್ತು ಸದಸ್ಯರು
ಶ್ರೀಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ
VEDA PATA SAHALE
ಶ್ರೀಗುರುನರಸಿಂಹ ನಿಗಮಾಗಮ ವೇದ ಪಾಠಶಾಲೆ
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ 576225 ಉಡುಪಿ ಜಿಲ್ಲೆ
ಸಾಲಿಗ್ರಾಮ- ಶ್ರೀಗುರುನರಸಿಂಹ ದೇವಳವು ನಡೆಸುತ್ತಿರುವ ನಿಗಮಾಗಮ ಪಾಠಶಾಲೆಯು ಇದೇ ಜುಲೈ ಒಂದರಿಂದ ಪ್ರಾರಂಭವಾಗಿದ್ದು, ಒಂಭತ್ತು ವಿದ್ಯಾರ್ಥಿಗಳಿಗೆ ವೇದಪಾಠವನ್ನು ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು ಹೇಳಿಕೊಡುತ್ತಿದ್ದಾರೆ.
ಆಸಕ್ತ ವಿಪ್ರ ವಟುಗಳು ವೇದ ಪಾಠಶಾಲೆಯನ್ನು ಸೇರಬಯಸಿದಲ್ಲಿ ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ 0820-2564544, 3204544, 9449545714,
ರಾಜ್ಯಸರ್ಕಾರ ನಡೆಸುವ ಋಗ್ವೇದ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳಿಗೆ ಐದು ವರ್ಷದ ತರಬೇತಿಯೊಂದಿಗೆ ಧಾರ್ಮಿಕ ದತ್ತಿ ಇಲಾಖೆ ನಡೆಸುವ ವಾತುಲಾಗಮದ ಪ್ರವರ ಪರೀಕ್ಷೆಗೆ ಮೂರು ವರ್ಷದ ತರಬೇತಿಯನ್ನು ನೀಡಲಾಗುವುದು.
ಪ್ರತಿ ವಿದ್ಯಾರ್ಥಿಗಳಿಗೆ ಅಭ್ಯಾಸ ವೇತನ (ಸ್ಟೈಫಂಡ್) ದೊಂದಿಗೆ ಉಚಿತ ಊಟ ವಸತಿಯನ್ನು ಮತ್ತು ವಿಶೇಷ ಕೊಡುಗೆಗಳನ್ನು ನೀಡಲಾಗುವುದು. ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು ಮತ್ತು ವೇ ಮೂ. ಗುಂಡ್ಮಿ ವೆಂಕಟರಮಣ ನಾವಡರ ಸಹಕಾರದೊಂದಿಗೆ ನಡೆಯುತ್ತಿರುವ ಈ ವೇದ ಪಾಠಶಾಲೆಗೆ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀದೇವಳದ ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ಎ.ಜಗದೀಶ ಕಾರಂತ
ಅಧ್ಯಕ್ಷರು, ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ
Sri Guru Narasimha Nigam Agama Pata shale
ಶ್ರೀಗುರುನರಸಿಂಹ ನಿಗಮಾಗಮ ವೇದ ಪಾಠಶಾಲೆಗೆ ಅರ್ಜಿ ಆಹ್ವಾನ
ಸಾಲಿಗ್ರಾಮ- ಶ್ರೀಗುರುನರಸಿಂಹ ದೇವಳವು ನಡೆಸುತ್ತಿರುವ ನಿಗಮಾಗಮ ಪಾಠಶಾಲೆಗೆ ಸ್ಮಾರ್ತ ವಿಪ್ರ ವಟುಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜೂನ್ ಇಪ್ಪತ್ತೈದರ ಒಳಗೆ ಅಧ್ಯಕ್ಷರು, ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ-576225 ಉಡುಪಿ ಜಿಲ್ಲೆ ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ 0820-2564544, 3204544, 9449545714, ಮತ್ತು ಶ್ರೀದೇವಳದ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ರಾಜ್ಯಸರ್ಕಾರ ನಡೆಸುವ ಋಗ್ವೇದ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳಿಗೆ ಐದು ವರ್ಷದ ತರಬೇತಿಯೊಂದಿಗೆ ಧಾರ್ಮಿಕ ದತ್ತಿ ಇಲಾಖೆ ನಡೆಸುವ ವಾತುಲಾಗಮದ ಪ್ರವರ ಪರೀಕ್ಷೆಗೆ ಮೂರು ವರ್ಷದ ತರಬೇತಿಯನ್ನು ನೀಡಲಾಗುವುದು.
ಪ್ರತಿ ವಿದ್ಯಾರ್ಥಿಗಳಿಗೆ ಅಭ್ಯಾಸ ವೇತನ (ಸ್ಟೈಫಂಡ್) ದೊಂದಿಗೆ ಉಚಿತ ಊಟ ವಸತಿಯನ್ನು ನೀಡಲಾಗುವುದು. ಶ್ರೀ ಶೇಷಗಿರಿ ನಾಡಿಗೇರ ಘನಪಾಟಿಯವರು ವೇ ಮೂ. ಗುಂಡ್ಮಿ ವೆಂಕಟರಮಣ ನಾವಡರ ಸಹಕಾರದೊಂದಿಗೆ ಜುಲೈ ಒಂದರಿಂದ ವೇದಾಧ್ಯಯವನ್ನು ಕಲಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀದೇವಳದ ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
KANYAKA SAMSKRUTHI SHIBHIRA- 2014
ಕನ್ಯಕಾ ಸಂಸ್ಕ್ರತಿ ಶಿಬಿರ - 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ದಿನಾಂಕ 11-04-2014 ರಿಂದ 13-04-2014 ರವರೆಗೆ 20 ವರ್ಷದ ಒಳಗಿನ ವಿಪ್ರ ಹೆಣ್ಣುಮಕ್ಕಳಿಗೆ ಕನ್ಯಕಾ ಸಂಸ್ಕ್ರತಿ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರದಲ್ಲಿ ಶಿಬಿರಾರ್ಥಿಯೊಂದಿಗೆ ಅವರ ತಾಯಿ ಮತ್ತು ಮನೆಯ ಮಹಿಳೆಯರು ಭಾಗವಹಿಸಬಹುದಾಗಿದೆ.
ಈ ಶಿಬಿರವು ನಮ್ಮ ಸಂಸ್ಕ್ರತಿ, ಕಲೆ, ಸ್ವರಕ್ಷಣೆ, ಸ್ಪರ್ಧೆಗಳು ಮತ್ತು ಮನೋರಂಜನೆಯನ್ನು ಒಳಗೊಂಡಿರುತ್ತದೆ, ಶಿಬಿರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಶ್ರೀದೇವಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ
ಸಾಲಿಗ್ರಾಮ
VASANTHA VEDA SHIBIRA 2014
ವಸಂತವೇದ ಶಿಬಿರ 2014 :- ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಮತ್ತು ಕೂಟಮಹಾಜಗತ್ತು ಸಾಲಿಗ್ರಾಮ (ರಿ) ಸಾಲಿಗ್ರಾಮ ಅಂಗಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 18.04.2014 ರಿಂದ 08.05.2014 ರವರೆಗೆ ವಿಪ್ರ ವಟುಗಳಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು.
ಈ ಶಿಬಿರದ ಪಠ್ಯಕ್ರಮವು ಋಗ್ವೇದವಾಗಿದ್ದು ಸ್ಮಾರ್ತ ಪದ್ದತಿಯಲ್ಲಿ (ವಿಭೂತಿ ಧಾರಣೆ) ಹೇಳಿಕೊಡಲಾಗುವುದು, ಸಂಧ್ಯಾವಂದನೆ ಪಂಚಾಯತನ ಪೂಜಾಪದ್ಧತಿ, ರುದ್ರ ಪವಮಾನ, ಪಂಚಾಂಗ ಪಠಣ ಮುಂತಾದ ಪಠ್ಯಗಳೊಂದಿಗೆ 5 ವರ್ಷ ಅವಧಿಯಲ್ಲಿ ಹೇಳಿಕೊಡಲಾಗುವುದು.
ಶಿಬಿರಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿಯನ್ನು ಶ್ರೀದೇವಳದ ಕಛೇರಿಯಿಂದ ಪಡೆಯಬಹುದಾಗಿದೆ. ದಿನಾಂಕ 08-04-2014ರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ , ಪ್ರಥಮ ತರಗತಿಗೆ ಸೇರುವ ವಿದ್ಯಾರ್ಥಿಗಳು ಮಾತ್ರ ರೂ.500/-ನ್ನು ಠೇವಣಿಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಶಿಬಿರ ಪೂರ್ಣಗೊಳಿಸಿದಲ್ಲಿ ಮಾತ್ರ ಠೇವಣಿಯನ್ನು ನಿಬಡ್ಡಿಯೊಂದಿಗೆ ಹಿಂದುರುಗಿಸಲಾಗುವುದು.
ಬಂಟ್ವಾಳ, ಜಯಪುರ, ಸುಳ್ಯ, ಮಂಗಳೂರು, ಬಸ್ರೂರು, ಕಳಸ ಬಾಳೆಹೊಳೆ, ಮುಂಬಯಿ, ಮುಂತಾದ ಕಡೆಗಳಲ್ಲಿ ಕೂಟಮಹಾಜಗತ್ತು ಸಾಲಿಗ್ರಾಮ(ರಿ) ಇದರ ಆಯಾಯ ಅಂಗಸಂಸ್ಥೆಗಳ ಸಹಕಾರದೊಂದಿಗೆ ವಸಂತ ವೇದ ಶಿಬಿರವನ್ನು ನಡೆಸಲಾಗುವುದು. ಈ ಶಿಬಿರವು ಶ್ರೀದೇವಳದ ಉಪಶಾಖೆಯಾಗಿದ್ದು ಎಲ್ಲಾ ಪಠ್ಯಕ್ರಮಗಳು ಒಂದೇ ಆಗಿರುತ್ತದೆ. ಆದ್ದರಿಂದ ಸಮೀಪದ ವಿಪ್ರ ವಟುಗಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಆಡಳಿತ ಮಂಡಳಿ
ಶ್ರೀಗುರುನರಸಿಂಹ ದೇವಸ್ಥಾನ
ಸಾಲಿಗ್ರಾಮ
TV Program
ಶ್ರೀಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ :- ದಿನಾಂಕ 05.12.2013 ರ ಬೆಳಗ್ಗೆ ಗಂಟೆ 6.30 ರಿಂದ 6.50ರ ವರೆಗೆ "ಪ್ರದಕ್ಷಿಣೆ" ಕಾರ್ಯಕ್ರಮದಲ್ಲಿ ಶ್ರೀದೇವಳದ ಬಗ್ಗೆ ಚಿತ್ರಣವನ್ನು ತಾವು ವಿಕ್ಷಿಸಬಹುದಾಗಿದೆ.....
RataSaptami
ರಥ ಸಪ್ತಮಿ :- ದಿನಾಂಕ 17.02.2013 ರಂದು ರಥಸಪ್ತಮಿಯನ್ನು ಆಚರಿಸಲಾಯಿತು. ಶ್ರೀದೇವಳದ ಸಾಂಪ್ರಾದಾಯಿಕ ಸೇವೆಯಾದ ಈ ಸೇವೆಯನ್ನು ಮಂಟಪ ಉಪಾಧ್ಯಾಯರು ನಡೆಸಿಕೊಂಡು ಬರುತ್ತಿದ್ದು ಬೆಳಗ್ಗೆ ಸಂಹಿತಾಭಿಷೇಕ, ವಿಶೇಷ ಪೂಜೆ ಮಧ್ಯಾಹ್ನ ಪುಷ್ಫರಥೋತ್ಸವನ್ನು ಆಚರಿಸಲಾಯಿತು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೆರೆದಿದ್ದ ಎಲ್ಲಾ ಭಕ್ತರು ಸ್ವೀಕರಿಸಿದರು.
Siyala Abhisheka
ಸೀಯಾಳಾಭಿಷೇಕ :- ಪ್ರತಿ ವರ್ಷದಂತೆ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ದಿನಾಂಕ 16-06-2013ರ ಭಾನುವಾರದಂದು ಗಂಟೆ 10-00 ಕ್ಕೆ ಶ್ರೀಗುರುನರಸಿಂಹ ಮತ್ತು ಪರಿವಾರ ದೇವರುಗಳಿಗೆ "ಸೀಯಾಳಾಭಿಷೇಕವನ್ನು" ಸಾರ್ವಜನಿಕ ನೆಲೆಯಲ್ಲಿ ನಡೆಸಲು ಉದ್ದೇಶಿಸಿದ್ದು ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೀಯಾಳವನ್ನು ತಂದು ಸಕ್ರಿಯವಾಗಿ ಭಾಗವಹಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ಕೋರಲಾಗಿದೆ.
ದಿನಾಂಕ 15.06.2013 ಶನಿವಾರದಂದು ಮಿಥುನ ಸಂಕ್ರಮಣವನ್ನು ಆಚರಿಸಲಾಗುವುದು. ಆ ಪ್ರಯುಕ್ತ ಗಣಹೋಮ ಮತ್ತು ಪುಷ್ಫರಥೋತ್ಸವನ್ನು ನಡೆಸಲಾಗುವುದು.
Kanyaka Samskruthi Shibira
ಕನ್ಯಕಾ ಸಂಸ್ಕ್ರತಿ ಶಿಬಿರ :- ದಿನಾಂಕ 11.04.2013 ರಿಂದ 13.04.2013 ರವರೆಗೆ ಶ್ರೀದೇವಳದ ಆಡಳಿತ ಮಂಡಳಿಯು ಪ್ರತಿ ವರ್ಷದಂತೆ ಈ ಸಲವೂ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಹಿಳಾವೇದಿಕೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.

ಕನ್ಯಕಾ ಸಂಸ್ಕ್ರತಿ ಶಿಬಿರ ಉದ್ಘಾಟನೆ
39 ಜನ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು ಹಾಗೂ ಇವರೆಲ್ಲರಿಗೂ ನಮ್ಮ ಸಂಸ್ಕ್ರತಿ ಉಳಿಸಿ ಬೆಳೆಸುವ ಮತ್ತು ಮನೋಬಲವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭ